ಹೊಸ ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ ಮಾಲಾಶ್ರೀ:ನಟಿ ಮಾಲಾಶ್ರೀ ಅಭಿನಯದ 'ಉಪ್ಪು ಹುಳಿ ಕಾರ' ಸಿನಿಮಾ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ಆ ಚಿತ್ರದ ನಂತರ ಮಾಲಾಶ್ರೀ ಎರಡು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಮೊದಲು ಕನಸಿನ ರಾಣಿ ನಂತರ ಆಕ್ಷನ್ ಕ್ವೀನ್ ಅಂತ ಕರೆಸಿಕೊಂಡಿದ್ದ ಮಾಲಾಶ್ರೀ ಈಗ ವಿಭಿನ್ನ ಪಾತ್ರ ಮಾಡುವ ಮನಸು ಮಾಡಿದ್ದಾರೆ. ಈ ಬಾರಿ ಹಾರರ್ ಚಿತ್ರಕ್ಕೆ ಕೈ ಹಾಕಿರುವ ಮಾಲಾಶ್ರೀ ತಮ್ಮ ಪಾತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.ಡಿಫರೆಂಟ್ ಕಥೆ ಇರುವ ಈ ಹಾರರ್, ಸಿನಿಮಾದಲ್ಲಿ ನಟಿಸುವುದಕ್ಕೆ ಮಾಲಾಶ್ರೀ ಕೂಡ ತುಂಬ ಉತ್ಸುಕರಾಗಿದ್ದಾರೆ. ಚಿತ್ರದ ಕಥೆ ಅವರಿಗೆ ತುಂಬ ಇಷ್ಟ ಆಗಿದ್ದು, ನಟಿಸುವುದಕ್ಕೆ ಓಕೆ ಎಂದಿದ್ದಾರೆ. ಈಗಾಗಲೇ ಆ ಪಾತ್ರಕ್ಕಾಗಿ ತಯಾರಿ ಶುರುವಾಗಿದ್ದು, 9 ಕೆಜಿ ತೂಕ ಕಡಿಮೆ ಮಾಡಿದ್ದಾರಂತೆ. ಅಂದಹಾಗೆ, ಮಾಲಾಶ್ರೀ ಅವರ ಈ ಎರಡು ಹೊಸ ಚಿತ್ರಗಳು ಅವರ ರಾಮು ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆ.ನಟಿ ಮಾಲಾಶ್ರೀ ಅಭಿನಯದ 'ಉಪ್ಪು ಹುಳಿ ಕಾರ' ಸಿನಿಮಾ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. <br /> <br />malashree starring "uppu huli kara" will be on bigg screen from next week,as she acting in 2 more movies malashree have reduce 9kg of weight, first malashree dream queen, now action queen ,watch this video